Wednesday, 1 June 2022

ಉತ್ತಮ ಪೊಷಕರಾಗಲು 25 ಸೂತ್ರಗಳು


1.ಮಕ್ಕಳು ಜೊತೆಗಿದ್ದಾಗ ಮೊಬೈಲ್‌ನ್ನು ಪಕ್ಕಕ್ಕಿಟ್ಟು ಬಿಡಿ.
2. ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಗಮನವಿಟ್ಟು ಕೇಳಿಸಿಕೊಳ್ಳಿ.
3. ಅವರ ದೃಷ್ಟಿಕೋನ ಹಾಗೂ ಅಭಿಪ್ರಾಯಗಳನ್ನು ಗೌರವದಿಂದ ಒಪ್ಪಿಕೊಳ್ಳಿ.
4.ಅವರ ಜೊತೆ ಸಾಧ್ಯವಾದಷ್ಟು ಮಾತುಕತೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
5. ಅವರನ್ನು ಗೌರವದಿಂದ ಕಾಣಿರಿ, ಹಾಗೂ ಸದಾ ಅವರನ್ನು ರಚನಾತ್ಮಕವಾಗಿ ಹೊಗಳಿ.
6.ಅವರೊಂದಿಗೆ ಸಂತಸದ ವಿಚಾರಗಳನ್ನು ಹಂಚಿಕೊಳ್ಳಿ.
7. ಅವರ ಸ್ನೇಹಿತರ ಬಗ್ಗೆ ಹಾಗು ಅವರಿಷ್ಟಪಡುವ ವ್ಯಕ್ತಿಗಳ ಬಗ್ಗೆ ಒಳ್ಳೆಯ ಮಾತಾಡಿ.
8.ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ನೆನಪಿನಲ್ಲಿಡಿ.
9.ಅವರು ಹೇಳಿದ ವಿಷಯವನ್ನೇ ಪದೇ ಪದೇ ಹೇಳುತ್ತಿದ್ದರೂ ಮೊದಲ ಸಾರಿ ಕೇಳುತ್ತಿರುವಂತೆ ಕುತೂಹಲದಿಂದ ಆಲಿಸಿ.
10 ಗತಿಸಿ ಹೋದ ಕಹಿ ನೆನಪುಗಳನ್ನು ಪದೇ ಪದೇ ಜ್ಞಾಪಿಸಬೇಡಿ.
11. ಅವರ ಉಪಸ್ಥಿತಿಯಲ್ಲಿ ಅವರಿಗೆ ಉಚಿತವಲ್ಲದ ಸಂಭಾಷಣೆ ಬೇಡ.
12 ಮಕ್ಕಳ ಸಣ್ಣ ಪುಟ್ಟ ಸಾಧನೆಯನ್ನು ಹಬ್ಬದಂತೆ ಆಚರಿಸಿ ಉಡುಗೊರೆ ಕೊಡಿ.
13. ಅವರ ಆಲೋಚನೆ, ಅಭಿಪ್ರಾಯಗಳನ್ನು ಅಲ್ಲಗಳೆಯಬೇಡಿ.
14.ಅವರು ಮಾತನ್ನು ಆರಂಭಿಸುವಾಗಲೇ ಬಾಯಿಮುಚ್ಚು ಎಂದು ತಡೆಯಬೇಡಿ.
15. ಅವರಿಗೆ ನಾಯಕತ್ವದ ಅವಕಾಶಗಳನ್ನು ನೀಡಿ.
16. ಅವರ ಜೊತೆಯಲ್ಲೇ ಸಾಗುತ್ತ ಹೆಜ್ಜೆ ಹೆಜ್ಜೆಗು ಆತ್ಮವಿಶ್ವಾಸ ತುಂಬಿ.
17. ಇತರೆ ಮಕ್ಕಳ ಪ್ರಗತಿಯನ್ನು ಮುಂದಿಟ್ಟುಕೊಂಡು, ನಿಮ್ಮ ಮಕ್ಕಳನ್ನು ಹೀಯಾಳಿಸಬೇಡಿ.
18.ಅವರನ್ನು ಆಸಕ್ತಿಯಿಂದ ಆಲಿಸುತ್ತಿರುವಂತೆ ಇರಲಿ ನಿಮ್ಮ ಭಂಗಿ.
19. ನಿಮ್ಮ ಪ್ರಾರ್ಥನೆಗಳಲ್ಲಿ ಅವರು ಸದಾ ಇರಲಿ.
20. ಅವರ ಸಾಮಿಪ್ಯದಲ್ಲಿ ನೀವು ಬೋರಾದಂತೆ, ಸುಸ್ತಾದಂತೆ ಕಾಣಿಸಿಕೊಳ್ಳಬೇಡಿ. ಲವಲವಿಕೆಯಾಗಿರಿ.
21.ಅವರ ತಪ್ಪುಗಳನ್ನು ಹಂಗಿಸಬೇಡಿ / ಕುಹಕ ನಗೆ ಬೇಡ.
22.ಅವರೊಂದಿಗೆ ಸಂಭಾಷಿಸುವಾಗ ನಿಮ್ಮ ಶಬ್ದಗಳ ಬಗ್ಗೆ ಜಾಗ್ರತೆಯಿರಲಿ. 
23.ಮಕ್ಕಳ ಮುಂದೆ ಕಿತ್ತಾಡಬೇಡಿ. ನಿಮ್ಮಲ್ಲಿ ಸಾಮರಸ್ಯದ ಕೊರತೆಯಿದ್ದರೆ ಅದು ನಿಮ್ಮಲ್ಲೆ ಇರಲಿ
24.ಮಕ್ಕಳು ನಿಮ್ಮ ಜೀವನದ ಅತ್ಯಂತ ಪ್ರಮುಖ ಆದ್ಯತೆಯಾಗಿರಲಿ. 
25.ಮಕ್ಕಳ ಮನಸ್ಸು ವಿಕಸನಗೊಳ್ಳುವ ಕಥೆಗಳನ್ನು ಕೇಳಲು,ನೋಡಲು ಅವರಿಗೆ ಅವಕಾಶ ನೀಡಿ.

 ಅಂತಿಮವಾಗಿ ನಿಮ್ಮ ಗುರಿ, ನಿಮ್ಮಮಕ್ಕಳು ಸತ್ಪ್ರಜೆಯಾಗುವುದಾಗಲಿ.

Thursday, 26 August 2021

ಒಮ್ಮೆ ಪ್ರಯ್ನಿಸಿ Teachmint App

 

Dear Teachers
ಅತ್ಯಂತ ತ್ವರಿತವಾಗಿ ಸರಳವಾಗಿ ನಿಮ್ಮ online ತರಗತಿಗಳನ್ನು ಪ್ರಾರಂಭಿಸಬಹುದು.
Download Teachmint App and start taking your live classes in just 2 minutes.
Here's the link👇👇👇
ಒಮ್ಮೆ ಪ್ರಯ್ನಿಸಿ
Click here to Download

Sign up as a Teacher and start teaching, selling courses and connect with other Teachers and also Join the students with *Student ID* with respect to Class and Subject

Sunday, 8 August 2021

ಟೋಕಿಯೋ ಒಲಂಪಿಕ್ಸ್ ಗೆ ವರ್ಣರಂಜಿತ ತೆರೆ



ಕ್ರೀಡಾ ಜಗತ್ತಿನ ಮಹೋನ್ನತ ಹಬ್ಬ ಟೋಕಿಯೋ ಒಲಿಂಪಿಕ್ಸ್‌ಗೆ ವರ್ಣರಂಜಿತ ನಯನ ಮನೋಹರ ಸಮಾರಂಭದೊಂದಿಗೆ ಅಂತಿಮ ತೆರೆ ಬಿದ್ದಿದೆ. ೧೬ ದಿನಗಳ ಕಾಲ ನಡೆದ ಕ್ರೀಡಾಕೂಟವು ಸಮಾಪ್ತಿಗೊಂಡಿತು. ಜುಲೈ ೨೩ರಿಂದ ಆಗಸ್ಟ್ ೮ರವರೆಗೆ ನಡೆದ ಒಲಿಂಪಿಕ್ಸ್ ಅನೇಕ ವಿಶ್ವದಾಖಲೆಗಳು ಮತ್ತು ಚಾರಿತ್ರಿಕ ಸಾಧನೆಗಳಿಗೆ ಸಾಕ್ಷಿಯಾಯಿತು. ಸೋಲು-ಗೆಲುವು, ನೋವು-ನಲಿವು, ನಿರಾಸೆ-ಭರವಸೆ ಇವುಗಳ ಒಟ್ಟು ಫಲಿತಾಂಶದಂತಿದ್ದ ಟೋಕಿಯೋ ಕ್ರೀಡಾ ಕುಂಭಮೇಳ ಉದಯೋನ್ಮುಖ ತಾರೆಯರಿಗೂ ಸ್ಛೂರ್ತಿಯ ಚಿಮ್ಮು ಹಲಗೆಯಾಯಿತು.

ಆಸ್ಟ್ರೇಲಿಯಾದ ಮತ್ಸ್ಯ ಕನ್ಯೆ ಎಮ್ಮಾ ಮ್ಯಾಕಿೋಂನ್ ಈಜು ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಒಟ್ಟು ಏಳು ಪದಕಗಳನ್ನು ಗಳಿಸಿ ನೂತನ ವಿಶ್ವದಾಖಲೆ ಸೃಷ್ಟಿಸಿದ್ದು ವಿಶೇಷವಾಗಿತ್ತು. ಭಾರತದ ಚಿನ್ನದಂಥ ಮಗ ನೀರಜ್ ಚೋಪ್ರಾ ಈ ಕ್ರೀಟಾ ಹಬ್ಬದಲ್ಲಿ ಭಾರತಕ್ಕೆ ಜಾವೆಲಿನ್ ಎಸೆತದಲ್ಲಿ ಬಂಗಾರದ ಉಡುಗೊರೆ ನೀಡಿ ಐತಿಹಾಸಿಕ ದಾಖಲೆ ಬರೆದರು.
ಹಿಂದಿನ ಒಲಿಂಪಿಕ್ಸ್ ಕ್ರೀಡಾಕೂಟಗಳಿಗೆ ಹೋಲಿಸಿದಲ್ಲಿ ಭಾರತದ ಸಾಧನೆ ಗಮನಾರ್ಹ. ಇದೇ ಮೊದಲ ಬಾರಿಗೆ ಭಾರತ ಸಪ್ತಪದಕಗಳೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದೆ

ಬ್ರೆಜಿಲ್‌ನಲ್ಲಿ ನಡೆದ ೨೦೧೬ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಒಂದು ಬೆಳ್ಳಿ ಸೇರಿದಂತೆ ಕೇವಲ ಎರಡು ಪದಕಗಳನ್ನು ಗಳಸಲಷ್ಟೇ ಶಕ್ತವಾಗಿತ್ತು. ಈಗ ಭಾರತದ ಸಾಧನೆ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ. ವೇಟ್ ಲಿಫ್ಟರ್ ಮೀರಾಬಾಯಿ ಚಾನು ಮತ್ತು ಕುಸ್ತಿ ಪಟು ರವಿಕುಮಾರ್ ದಹಿಯಾ ಅವರ ಬೆಳ್ಳಿ ಸಾಧನೆ ಹೆಮ್ಮೆಪಡುವಂಥದ್ದು. ಇದರ ಜೊತೆಗೆ ಬ್ಯಾಡ್ಮಿಂಟನ್ ಆಟಗಾತಿ ಪಿ.ವಿ.ಸಿಂಧು, ಬಾಕ್ಸರ್ ಲವ್ಲೀನಾ ಬೋರ್ಗೆಹೈನ್, ಪುರುಷರ ಹಾಕಿ ತಂಡ ಮತ್ತು ಕುಸ್ತಿಪಟು ಭಜರಂಗ್ ಪುನಿಯಾ ದೇಶಕ್ಕೆ ಕಂಚು ಪದಕ ದಕ್ಕಿಸಿಕೊಟ್ಟು ಗಮನಸೆಳೆದರು.

ನಾಲ್ಕು ದಶಕಗಳ ಬಳಿಕ ಪುರುಷರ ಹಾಕಿ ತಂಡದ ಸಾಧನೆ ಪುನರಾವರ್ತನೆ ಮಾಡುವಲ್ಲಿ ವಿಫಲರಾದ ಭಾರತ ವನಿತೆಯರ ವಿರೋಚಿತ ಸೋಲು ಕಂಡರೂ ಉತ್ತಮ ಪ್ರದರ್ಶನದೊಂದಿಗೆ ದೇಶದ ಮೆಚ್ಚುಗೆಗೆ ಪಾತ್ರವಾದರು. ಮಹಿಳೆಯರ ಗಾಲ್ಛ್ ಪಂದ್ಯದಲ್ಲಿ ಬೆಂಗಳೂರಿನ ಹುಡುಗಿ ಅದಿತಿ ಅಶೋಕ್ ಕೂದಲೆಳೆ ಅಂತರದಲ್ಲಿ ಕಂಚು ಪದಕದಿಂದ ವಂಚಿತರಾಗಿ ೪ನೇ ಸ್ಥಾನ ಗಳಿಸಿದ್ದು ಕೂಡ ಅಮೋಘ ಸಾಧನೆಯೇ. ಈ ಸ್ಥಾನಕ್ಕೇರಿದ ಭಾರತದ ಪ್ರಥಮ ಮಹಿಳಾ ಗಾಲ್ಛರ್ ಎಂಬ ಹೆಗ್ಗಳಿಕೆಗೆ ಅದಿತಿ ಪಾತ್ರರಾದರು.

ಈ ಬಾರಿ ಪದಕ ಪಟ್ಟಿಯಲ್ಲಿ ಅತಿ ಹೆಚ್ಚು ಬಂಗಾರದ ಪದಕಗಳನ್ನು ಗೆಲ್ಲುವುದರೊಂದಿಗೆ ಅಮೆರಿಕ ಅಗ್ರಸ್ಥಾನದಲ್ಲಿದೆ. ಚೀನಾ, ಜಪಾನ್, ಬ್ರಿಟನ್ ಮತ್ತು ರಷ್ಯಾ ನಂತರದ ಸ್ಥಾನಗಳಲ್ಲಿದೆ.

ಜುಲೈ ೨೩ರಂದು ಜಪಾನ್ ಚಕ್ರವರ್ತಿ ನರುಹೀಟೋ ಚಾಲನೆ ನೀಡಿದರು. ವಿವಿಧ ದೇಶಗಳ ಭವ್ಯ ಇತಿಹಾಸ ಮತ್ತು ಸಾಂಸ್ಕೃತಿ ಪರಂಪರೆಗಳನ್ನು ಸಾರುವ ಚಿತ್ತಾಕರ್ಷಕ ಕಾರ್ಯಕ್ರಮಗಳೊಂದಿಗೆ ಉದಯರವಿ ನಾಡು ಜಪಾನ್ ರಾಜಧಾನಿ ಟೋಕಿಯೋ ನಗರಿಯ ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ೩೨ನೇ ಒಲಿಂಪಿಕ್ಸ್ ಕ್ರೀಡಾಕೂಟ ವಿಧ್ಯುಕ್ತವಾಗಿ ಚಾಲನೆಗೊಂಡಿತು. ಒಟ್ಟು ೨೦೮ ದೇಶಗಳು ಪ್ರತಿನಿಧಿನಿಧಿಸಿದ್ದ ಟೋಕಿಯೋ ಒಲಿಂಪಿಕ್‌ನಲ್ಲಿ ೩೩ ಕ್ರೀಡೆಗಳು ನಡೆದು ಒಟ್ಟು ೧೫,೪೦೦ ಸ್ಪರ್ಧಿಗಳು ಪದಕಗಳಿಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಭಾರತದ ೧೨೭ ಕ್ರೀಡಾಪಟುಗಳು ತಮ್ಮ ಶಕ್ತಿ-ಸಾಮರ್ಥ್ಯವನ್ನು ಪಣಕ್ಕೊಡ್ಡಿದ್ದರು.

ಈ ಸಮಾರಂಭದಲ್ಲಿ ಕ್ರೀಡಾ ಧ್ವಜವನ್ನು ೨೦೨೪ರ ಒಲಿಂಪಿಕ್ಸ್ ಕ್ರೀಡಾಕೂಟದ ಅತಿಥ್ಯ ವಹಿಸುವ ಫ್ರಾನ್ಸ್‌ಗೆ ನೀಡಲಾಯಿತು. ಇದೇ ತಿಂಗಳು ೨೪ರಿಂದ ಆರಂಭವಾಗಲಿರುವ ಪ್ಯಾರಾಂಪಿಕ್ಸ್‌ಗೂ ಟೋಕಿಯೋ ಅತಿಥ್ಯ ವಹಿಸಲಿದ್ದು, ಭಾರತದ ಸ್ಪರ್ಧಿಗಳೂ ಸಹ ಪದಕಗಳಿಗೆ ಸೆಣಸಲಿದ್ದಾರೆ.

Way of Possibilities


Saturday, 7 August 2021

ಚಿನ್ನದ ಹುಡುಗ ನೀರಜ್​

 

ನೀರಜ್ ಚೋಪ್ರಾ 

              ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಒಲಿಂಪಿಕ್ಸ್ ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ ನಲ್ಲಿ ಅತ್ಯಮೋಘ ಪ್ರದರ್ಶನ ನೀಡಿ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಲಾಗಿದೆ.
ನೀರಜ್ ಚೋಪ್ರಾ ಅವರು ಶೂಟರ್ ಅಭಿನವ್ ಬಿಂದ್ರಾ (2008) ನಂತರ ವೈಯಕ್ತಿಕ ವಿಭಾಗದಲ್ಲಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಎರಡನೇ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾದರು.
ಚೋಪ್ರಾ ತನ್ನ ಎರಡನೇ ಪ್ರಯತ್ನದಲ್ಲಿ 87.58 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದು, ಇದು ಫೈನಲ್ ನಲ್ಲಿ ಅವರ ಶ್ರೇಷ್ಠ ಪ್ರದರ್ಶನವಾಗಿತ್ತು. ಈ ಪ್ರದರ್ಶನವೇ ಅವರಿಗೆ ಚಿನ್ನದ ಪದಕ ತಂದುಕೊಟ್ಟಿತು.
ಹರ್ಯಾಣದ ಪಾಣಿಪತ್ ಸಮೀಪದ ಖಂಡ್ರಾ ಗ್ರಾಮ 23 ವರ್ಷದ ರೈತನ ಮಗ ಅಥ್ಲೆಟಿಕ್ಸ್ ಜಗತ್ತನ್ನು ಅಚ್ಚರಿಗೆ ಕೆಡವಿದರು.
ಒಲಿಂಪಿಕ್ಸ್ ನಲ್ಲಿ ಇಂದು ಭಾರತದ ಪಾಲಿಗೆ ಸಂಭ್ರಮದ ಕ್ಷಣ. ಜಾವಲಿನ್ ಎಸೆತದಲ್ಲಿ ಹರಿಯಾಣ ಮೂಲದ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ತೋರುತ್ತದೆ. ಒಲಿಂಪಿಕ್ಸ್ ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಮೊಟ್ಟಮೊದಲ ಬಾರಿಗೆ ಸ್ವರ್ಣ ಪದವನ್ನು ತಂದು ಕೊಟ್ಟ ಕೀರ್ತಿ ನೀರಜ್ ಗೆ ಸಲ್ಲುತ್ತೆ.
ಚಿನ್ನದ ಹುಡುಗ ನೀರಜ್ ಗೆ ದೇಶೀಯ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಜೊತೆಗೆ ಸರ್ಕಾರವೂ ಬಹುಮಾನ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು, 'ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಇತಿಹಾಸ ಬರೆದಿದೆ. ನೀರಜ್ ಚೋಪ್ರಾ ಅವರ ಇಂದಿನ ಸಾಧನೆ ಅವಿಸ್ಮರಣೀಯ. ಅವರ ಸಾಧನೆ ಮತ್ತು ಉತ್ಸಾಹ ಎಲ್ಲರಿಗೂ ಪ್ರೇರಣೆ. ಚಿನ್ನ ಗೆದ್ದ ನೀರಜ್ ಅವರಿಗೆ ಅಭಿನಂದನೆಗಳು 'ಎಂದು ಟ್ವೀಟ್ ಮಾಡಿದ್ದಾರೆ.
'ನೀರಜ್ ಸಾಧಾನೆ ಇತಿಹಾಸ ಸೃಷ್ಟಿಸಿದೆ' ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಪ್ರಶಂಸಿಸಿದ್ದಾರೆ.
'ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ ಅವರಿಗೆ ಹೃತ್ಫೂರ್ವಕ ಅಭಿನಂದನೆಗಳು. ದೇಶಕ್ಕೆ ಒಂದು ಹೆಮ್ಮೆಯ ಕ್ಷಣ ... 'ಎಂದು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ.

ಚಿನ್ನದ ಹುಡುಗ ನೀರಜ್ ಗೆ ದೇಶೀಯ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಜೊತೆಗೆ ಹರಿಯಾಣ ಸರ್ಕಾರ 6 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.




Friday, 6 August 2021

ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಉಚಿತ ಆನ್ಲೈನ್ ತರಗತಿಗಳು

Teachmint ನ ಸಹಯೋಗದೊಂದಿಗೆ

 


ಕಲಿಕೆಯು ನಿಂತ ನೀರಲ್ಲ ಹರಿಯುವ ನದಿ.

ಭೌತಿಕವಾಗಿ ತರಗತಿಗಳು ಪ್ರಾರಂಭವಾಗದಿದ್ದರೂ ಈ Covid-19 ರಲ್ಲಿ ಮಕ್ಕಳನ್ನು ಆನ್ ಲೈನ್ ಮೂಲಕ ಕಲಿಕೆಯಲ್ಲಿ ತೊಡಗಿಸಲು ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳಿಗಾಗಿ ಉಚಿತವಾಗಿ ಗಣಿತ ಮತ್ತು ವಿಜ್ಞಾನ ವಿಷಯಗಳ ಆನ್ಲೈನ್ ತರಗತಿಗಳು ಪ್ರಾರಂಭವಾಗುತ್ತಿವೆ.
ನಮ್ಮ ಮತ್ತು ನಿಮ್ಮ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಸಣ್ಣ ಪ್ರಯತ್ನ ಬನ್ನಿ ಭಾಗವಹಿಸಿ ಕಲಿಯಿರಿ.
👇 ನೊಂದಣಿಗಾಗಿ👇

Click here



Friday, 30 July 2021

Create your comment


 ಈ ವ್ಯಕ್ತಿಯ ಬಗೆಗಿನ ಸಾಲುಗಳನ್ನು comment ಮಾಡಿ 

Monday, 26 July 2021

ಕಾರ್ಗಿಲ್ ವಿಜಯ ದಿವಸ


 ಕಾರ್ಗಿಲ್‌ ಯುದ್ಧ... ಈ ಪದವೇ ಭಾರತೀಯರನ್ನು ರೋಮಾಂಚನಗೊಳಿಸುತ್ತದೆ. ಭಾರತೀಯ ಸೈನಿಕರ ಹೋರಾಟದ ಛಲ, ಶಕ್ತಿಗೆ ಸಾಕ್ಷಿಯಾದ ಯುದ್ಧವದು. ಅಲ್ಲದೆ ಪಾಕಿಸ್ತಾನ ಶಾಂತಿಯ ಮಾತಿನ ಬೆನ್ನಲ್ಲೇ ಭಾರತಕ್ಕೆ ಇರಿದ ಚೂರಿಯ ಗಾಯದ ಗುರುತೇ ಈ ಕಾರ್ಗಿಲ್‌. ಚಳಿಗಾಲದಲ್ಲಿ ಭಾರತದ ಪ್ರದೇಶವನ್ನು ಅಕ್ರಮಿಸಿಕೊಂಡಿದ್ದ ಪಾಕಿಸ್ತಾನಕ್ಕೆ ಭಾರತ ಗಡಿಯಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಟ್ಟಹೊಡೆತದ ನೆನಪಿನ ದಿನವೇ ಕಾರ್ಗಿಲ್‌ ವಿಜಯ್‌ ದಿವಸ್‌.

ಕಾರ್ಗಿಲ್‌ ಎಲ್ಲಿದೆ?

ಭಾರತದ ಮುಕುಟ ಮಣಿಯಂತಿರುವ ಕಾಶ್ಮೀರದಲ್ಲಿದೆ. ಇಂದಿನ ಕೇಂದ್ರಾಡಳಿತ ಪ್ರದೇಶವಾದ ಲಡಾಕ್‌ನ ಒಂದು ತಹಸೀಲ್‌ ಈ ಕಾರ್ಗಿಲ್‌. ಹಿಮಾಲಯದ ಬೆಟ್ಟಗುಡ್ಡಗಳಿಂದ ಆವೃತವಾದ ಪ್ರದೇಶ. ಕಾರ್ಗಿಲ್‌ ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 205 ಕಿ.ಮೀ. ದೂರದಲ್ಲಿದೆ.ಲೇಹ್‌ ಮತ್ತು ಶ್ರೀನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 1 ಕಾರ್ಗಿಲ್‌ ಮೂಲಕ ಹಾದು ಹೋಗುತ್ತದೆ. ನೆನಪಿರಲಿ ಈ ಪ್ರದೇಶದಲ್ಲಿರುವ ಏಕೈಕ ಹೆದ್ದಾರಿ ಇದೊಂದೆ. ಅಲ್ಲದೆ ವಿಶ್ವದ ಅತ್ಯಂತ ಎತ್ತರದಲ್ಲಿರುವ ಯುದ್ಧ ಭೂಮಿ ಸಿಯಾಚಿನ್‌ಗೂ ಸಂಪರ್ಕ ಕಲ್ಪಿಸುತ್ತದೆ ಈ ಹೆದ್ದಾರಿ.

1999ರಲ್ಲಿ ಆಗಿದ್ದೇನು?

ಕಾರ್ಗಿಲ್‌ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಲೈನ್‌ ಆಫ್‌ ಕಂಟ್ರೋಲ್‌ (ಎಲ್‌ಒಸಿ) ಇದೆ. ಇಲ್ಲಿ ಚಳಿಗಾಲದಲ್ಲಿ ಉಷ್ಣಾಂಶ ಮೈನಸ್‌ 48 ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿಯುತ್ತದೆ. ಇದರಿಂದ ಇಲ್ಲಿ ಗಡಿ ಕಾಯುವುದು ಭಾರತಕ್ಕೆ ಸವಾಲಿನ ಕೆಲಸ. ಚಳಿಗಾಲದಲ್ಲಿ ಭಾರತೀಯ ಸೈನಿಕರು ಇಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ. ಚಳಿಗಾಲ ಮುಗಿದ ಬಳಿಕ ಇಲ್ಲಿಗೆ ಮತ್ತೆ ಕಾವಲು ಕಾಯಲು ಹೋಗುವುದು 1999ರ ವರೆಗೂ ಇದ್ದ ಪದ್ಧತಿ. ಈ ಸಂದರ್ಭವನ್ನೇ ಬಳಸಿಕೊಂಡ ಪಾಕಿಸ್ತಾನ, ಕಾಶ್ಮೀರದ ಹೋರಾಟಗಾರರ ಹೆಸರಿನಲ್ಲಿ ತನ್ನದೇ ಸೈನಿಕರು, ಪ್ಯಾರಾಮಿಲಿಟರಿ ಪಡೆಯನ್ನು ಬಳಸಿ ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೆ 107 ಕಿ.ಮೀ. ದೂರದಲ್ಲಿರುವ ಸ್ಕರ್ದು (ಪಾಕ್‌ ಅಕ್ರಮಿತ ಪ್ರದೇಶ)ವಿನಿಂದ ಕಾರ್ಗಿಲ್‌ನ ಗುಡ್ಡಗಾಡು ಪ್ರದೇಶದಲ್ಲಿ ಅಡಗಿ ಕುಳಿತ ಉಗ್ರರಿಗೆ ಶಸ್ತಾರಸ್ತ್ರ ಪೂರೈಸಲು ಅನುಕೂಲವಾಗುತ್ತದೆ ಎಂದು ಪಾಕ್‌ ಯೋಜಿಸಿತ್ತು.

ಶಾಂತಿ ಮಂತ್ರದ ಬೆನ್ನಲ್ಲೇ ಪಾಕಿಸ್ತಾನದ ಮೋಸದಾಟ

ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು 1999ರ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಗಡಿಯ ಮೂಲಕವೇ ತೆರಳಿ ಶಾಂತಿ ಮಂತ್ರ ಪಠಿಸಿದ್ದರು. ಅಲ್ಲದೆ ಕಾಶ್ಮೀರದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು. ದೆಹಲಿ-ಲಾಹೋರ್‌ ನಡುವೆ ಶಾಂತಿಯ ಸೂಚಕವಾಗಿ ಬಸ್‌ ಸಂಚಾರಕ್ಕೆ ಚಾಲನೆ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಪಾಕಿಸ್ತಾನ ಕಾರ್ಗಿಲ್‌ನಲ್ಲಿ ತನ್ನ ಕುಚೇಷ್ಟೆಯನ್ನು ಪ್ರದರ್ಶಿಸಿತು.

ಕುರಿಗಾಹಿಗಳು ನೀಡಿದ ಸುಳಿವು

1999ರ ಮೇ 3ರಂದು ಕಾರ್ಗಿಲ್‌ ಗುಡ್ಡಗಾಡು ಪ್ರದೇಶದಲ್ಲಿ ಕುರಿ ಮೇಯಿಸಲು ಹೋಗಿದ್ದ ಕುರಿಗಾಹಿಗಳು ನಮ್ಮ ಪ್ರದೇಶದಲ್ಲಿ ಪಾಕಿಸ್ತಾನಿಗಳ ಇರುವಿಕೆಯ ಸುಳಿವನ್ನು ಭಾರತದ ಸೈನ್ಯಕ್ಕೆ ನೀಡಿದರು. ಮೇ 5ರಂದು ಭಾರತೀಯ ಸೇನೆಯ ಪೆಟ್ರೋಲಿಂಗ್‌ ತಂಡವು ಕಾರ್ಗಿಲ್‌ ಪ್ರದೇಶದ ಸ್ಥಿತಿ ಅವಲೋಕಿಸಲು ತೆರಳಿದಾಗ ಅವರನ್ನು ಸೆರೆ ಹಿಡಿದ ಪಾಕ್‌ ಸೈನಿಕರು, ನಮ್ಮ ಸೈನಿಕರನ್ನು ಅತ್ಯಂತ ಹೀನವಾಗಿ ಕೊಂದುಹಾಕಿದರು. ಇದಾದ ಬಳಿಕ ಸಂಪೂರ್ಣವಾಗಿ ಎಚ್ಚೆತ್ತ ಭಾರತೀಯ ಸೇನೆಯು ಯುದ್ಧಕ್ಕೆ ಸಜ್ಜಾಯಿತು. ಇಡೀ ಕಾರ್ಯಾಚರಣೆಗೆ ಆಪರೇಷನ್‌ ವಿಜಯ್‌ ಎಂದು ಹೆಸರಿಸಿ ಯುದ್ಧಕ್ಕೆ ಇಳಿಯಿತು.

ಇದು ಜಗತ್ತಿನ ಅತ್ಯಂತ ವಿಶಿಷ್ಟ ಯುದ್ಧ ಏಕೆ?

ಬೆಟ್ಟದ ಮೇಲೆ ಕುಳಿತಿದ್ದ ಪಾಕ್‌ಗೆ ಯುದ್ಧ ಮಾಡಲು ಹೆಚ್ಚು ಅನುಕೂಲಗಳಿದ್ದವು. ಬೆಟ್ಟಗಳ ತಳಭಾಗದಿಂದ ಮೇಲಕ್ಕೆ ಹೋಗುವುದು ಭಾರತೀಯ ಸೈನಿಕರಿಗೆ ಅತ್ಯಂತ ಸವಾಲಿನ ಕೆಲಸವಾಗಿತ್ತು. ಮದ್ದುಗುಂಡುಗಳನ್ನು ಹೊತ್ತು ಬೆಟ್ಟಹತ್ತಿ ಪಾಕ್‌ ಸೈನಿಕರನ್ನು ಬಗ್ಗು ಬಡಿದದ್ದು, ಪ್ರಪಂಚದ ಯುದ್ಧ ಇತಿಹಾಸದಲ್ಲಿ ಒಂದು ಮೈಲುಗಲ್ಲು. ಪಾಯಿಂಟ್‌ 5353ಯನ್ನು ಮರುವಶ ಮಾಡಿಕೊಂಡ ಭಾರತೀಯ ಸೇನೆಯು ಬಳಿಕ ಬಟಾಲಿಕ್‌ ಪ್ರದೇಶವನ್ನು ತನ್ನದಾಗಿಸಿಕೊಂಡಿತು. ಟೈಗರ್‌ ಹಿಲ್‌ ಪ್ರದೇಶವನ್ನು ವಶಕ್ಕೆ ಪಡೆದಿದ್ದು ಭಾರತೀಯ ಸೇನೆಗೆ ಸಿಕ್ಕಿ ಅತಿ ದೊಡ್ಡ ಜಯ. ಬಳಿಕ ಇನ್ನಿತರ ಪ್ರದೇಶವನ್ನು ಒಂದೊಂದಾಗಿ ತನ್ನದಾಗಿಸಿಕೊಂಡ ಭಾರತೀಯ ಸೇನೆಯು ತನ್ನ ತಾಕತ್ತು ಏನು ಎಂಬುದನ್ನು ಪಾಕಿಸ್ತಾನಕ್ಕಷ್ಟೇ ಅಲ್ಲ, ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿತು.

ಆಪರೇಷನ್‌ ಸಫೇದ್‌ ಸಾಗರ್‌

ಕಾರ್ಗಿಲ್‌ ಯುದ್ಧದ ವೇಳೆ ಕಾಶ್ಮೀರದ ಪಾಕ್‌ ಆಕ್ರಮಿತ ಪ್ರದೇಶಗಳ ಮೇಲೆ ಭಾರತೀಯ ವಾಯು ಸೇನೆಯು ಆಪರೇಷನ್‌ ಸಫೇದ್‌ ಸಾಗರ್‌ ಹೆಸರಲ್ಲಿ ಮೇ 26ರಂದು ದಾಳಿ ಆರಂಭಿಸಿತು. ಎಂಐಜಿ 21, 27 ಎರಡು ಯುದ್ಧ ವಿಮಾನಗಳನ್ನು ಭಾರತ ಕಳೆದುಕೊಂಡಿತು. ಮೇ 27ರಂದು ಎಂಐಜಿ-27 ಯುದ್ಧ ವಿಮಾನವನ್ನು ಪಾಕಿಸ್ತಾನ ಹೊಡೆದುರಳಿಸಿತು. ಅದರಲ್ಲಿದ್ದ ಲೆಫ್ಟಿನೆಂಟ್‌ ಕಂಬಂಪತಿ ನಚಿಕೇತ ಅವರನ್ನು ಪಾಕ್‌ ಸೆರೆ ಹಿಡಿಯಿತು. ಯುದ್ಧದ ಬಳಿಕ ಅವರನ್ನು ಬಿಡುಗಡೆ ಮಾಡಿತು.

ಆಪರೇಷನ್‌ ತಳವಾರ್‌

ನೌಕಾ ಪಡೆಯು 'ಆಪರೇಷನ್‌ ತಳವಾರ್‌' ಹೆಸರಿನಲ್ಲಿ ಪಾಕಿಸ್ತಾನದ ವಾಣಿಜ್ಯ ನಗರ ಕರಾಚಿಯ ಮೇಲೆ ಕಣ್ಣಿಟ್ಟಿತ್ತು. ಅರಬ್ಬಿ ಸಮುದ್ರದಲ್ಲಿ ತನ್ನ ಹಿಡಿತ ಹೆಚ್ಚಿಸಿದ್ದ ನೌಕಾ ಪಡೆಯು ಪಾಕಿಸ್ತಾನಕ್ಕೆ ಪೆಟ್ರೋಲಿಯಂ ಉತ್ಪನ್ನ ಹೋಗದಂತೆ ತಡೆದಿತ್ತು. ಒಂದು ವೇಳೆ ಯುದ್ಧ ಇನ್ನು 10 ದಿನ ಮುಂದುವರಿದಿದ್ದರೂ ಪಾಕಿಸ್ತಾನದ ಸ್ಥಿತಿ ಅಧೋಗತಿಗೆ ತಲುಪುತ್ತಿತ್ತು. ಏಕೆಂದರೆ ಪೆಟ್ರೋಲಿಯಂ ಉತ್ಪನ್ನಗಳೇ ಪಾಕಿಸ್ತಾನದಲ್ಲಿ ಮುಗಿಯುವ ಹಂತಕ್ಕೆ ಬಂದಿದ್ದವು ಎಂದು ಅಂದಿನ ಪಾಕ್‌ ಪ್ರಧಾನಿ ನವಾಜ್‌ ಶರೀಫ್‌ ಹೇಳಿಕೊಂಡಿದ್ದರು.

ಜುಲೈ 14ರಂದು ಅಂದಿನ ಪ್ರಧಾನಿ ವಾಜಪೇಯಿ ಅವರು ಯುದ್ಧದಲ್ಲಿ ಭಾರತ ಗೆದ್ದಿದೆ ಎಂದು ಘೋಷಿಸಿದರು. ಜುಲೈ 24ರಂದು ಭಾರತೀಯ ಸೇನೆಯು ಕಾರ್ಗಿಲ್‌ ಯುದ್ಧ ಮುಗಿದ ಬಗ್ಗೆ ಅಧಿಕೃತ ಘೋಷಣೆ ಮಾಡಿತು. ಬಳಿಕ ಪ್ರತಿವರ್ಷ ಜೂನ್‌ 26ರಂದು ವಿಜಯ್‌ ದಿವಸ್‌ ಆಚರಣೆ ಆರಂಭವಾಯಿತು.

ಪಾಕ್‌ ಈ ಯುದ್ಧ ಆರಂಭಿಸಿದ್ದೇಕೆ?

- ಕಾರ್ಗಿಲ್‌ ಪ್ರದೇಶವನ್ನು ಹೋರಾಟಗಾರರು ವಶಕ್ಕೆ ಪಡೆದಿದ್ದಾರೆ, ಹಾಗಾಗಿ ಕಾಶ್ಮೀರವನ್ನು ಸ್ವತಂತ್ರ ದೇಶ ಎಂದು ಘೋಷಿಸಲು ಭಾರತದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಸೃಷ್ಟಿಸುವುದು.

- ಭಾರತವು ವಿಶ್ವದ ಅತಿ ಎತ್ತರದ ಯುದ್ಧ ಪ್ರದೇಶವಾದ ಸಿಯಾಚಿನ್‌ನಲ್ಲಿರುವ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಮಾಡಲು ಪಾಕ್‌ ಯೋಜಿಸಿತ್ತು. ಏಕೆಂದರೆ ಈ ಪ್ರದೇಶ ಎರಡೂ ದೇಶಗಳ ಆಯಾಕಟ್ಟಿನ ಜಾಗದಲ್ಲಿದ್ದು, ಮಹತ್ವದ ಪ್ರದೇಶವಾಗಿದೆ.

- ಕಾರ್ಗಿಲ್‌ನಲ್ಲಿ ಎನ್‌ಎಚ್‌-1 ಹಾದು ಹೋಗುತ್ತದೆ. ಈ ಹೆದ್ದಾರಿಯು ಶ್ರೀನಗರ ಮತ್ತು ಲೇಹ್‌ ಅನ್ನು ಸಂಪರ್ಕಿಸುವ ಏಕೈಕ ಮಾರ್ಗ. ಇದರ ಮೇಲೆ ಹಿಡಿತ ಸಾಧಿಸಿದರೆ ಭಾರತವನ್ನು ತನಗೆ ಬೇಕಾದಂತೆ ಬಗ್ಗಿಸಬಹುದು ಎಂಬ ಕಲ್ಪನೆ ಪಾಕಿಸ್ತಾನಕ್ಕಿತ್ತು. ಆದರೆ ಅದು ಸಂಪೂರ್ಣ ವಿಫಲವಾಯಿತು.

- ಇಷ್ಟೆಲ್ಲಾ ಘಟನೆ ನಡೆಯುತ್ತಿದ್ದರೂ ಭಾರತದ ಸಂಯಮವನ್ನು ವಿಶ್ವವೇ ಮೆಚ್ಚಿತು. ಏಕೆಂದರೆ ತನ್ನ ಪ್ರದೇಶವನ್ನು ಮಾತ್ರ ವಶಕ್ಕೆ ಪಡೆದ ಭಾರತ ಒಮ್ಮೆಯೂ ಕೂಡ ಗಡಿ ದಾಟಿ ಪಾಕಿಸ್ತಾನದ ಮೇಲೆ ಮುಗಿಬೀಳಲಿಲ್ಲ.

Sunday, 25 July 2021

World Wrestling Championships (Gold Medal)

 

Priya Malik

ಹಂಗೇರಿ: ಭಾರತದ ಕುಸ್ತಿ ಪಟು ಪ್ರಿಯಾ ಮಲಿಕ್ ಅವರು ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ.
ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನ 73 ಕೆಜಿ ವಿಭಾಗದಲ್ಲಿ ಪ್ರಿಯಾ ಮಲಿಕ್ ಈ ಸಾಧನೆ ಮಾಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೀರಾ ಬಾಯ್ ಚಾನು ಶನಿವಾರ ವೆಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಇದಾದ ಮರುದಿನವೇ ಪ್ರಿಯಾ ಮಲಿಕ್ ಅವರು ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ.

ದೇಶಕ್ಕೆ ಚಿನ್ನದ ಸಂಭ್ರಮ..
ಹಂಗೇರಿಯಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗಳಿಸಿದ ಕುಸ್ತಿಪಟು ಪ್ರಿಯಾ ಮಲಿಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಕೊಂಡಯ್ಯುತ್ತಿರುವ ನಮ್ಮ ಹೆಣ್ಣು ಮಕ್ಕಳ ಸಾಧನೆಗಳು ಪ್ರಶಂಸನೀಯ... 💐💐💐

Saturday, 24 July 2021

India started medal hunting.

 

MIRABAI

ಟೋಕಿಯೋ ಒಲಿಂಪಿಕ್ ನಲ್ಲಿ ಪದಕದ ಬೇಟೆ ಆರಂಭಿಸಿದ ಭಾರತ. ಮಹಿಳೆಯರ 49 ಕೆ.ಜಿ. ವಿಭಾಗದ ವೆಯ್ಟ್ ಲಿಪ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದ ಚಾನು ಮೀರಾಭಾಯಿ ರವರಿಗೆ ಅಭಿನಂದನೆಗಳು...




The Man Beyond The Billions


Azim Hashim Premji

Born:                24 July 1945 (age 76)
                          Bombay, Bombay presidency, 
                          British India

Nationality:     Indian

Alma mater:    Stanford University (B.S.E)

Occupation:     Founder chairman of Wipro

Spouse(s):         Yasmeen

Children:           Rishad Premji, Tariq

Parent(s):          Mohamed Hashem Premji

Signature


  He is one of the richest person in India with an estimated net worth of US$32.8 billion according to Bloomberg Billionaires Index. In 2013, he agreed to give away at least half of his wealth by signing the Giving Pledge. Premji started with a $2.2 billion donation to the Azim Premji Foundation, focused on education in India. He topped the EdelGive Hurun India Philanthropy List for 2020.

Surya Namaskara(Tokyo)


Tokyo japan Olympics games opening ceremony with surya namaskar proud of our Nation

Proud to be an Indian 


 

Friday, 23 July 2021

All the Best To India


 ಈಗ ಲೈವ್ ಮಾಡಿ

ಟೋಕಿಯೊ ಒಲಿಂಪಿಕ್ಸ್ 2020 ಉದ್ಘಾಟನಾ ಸಮಾರಂಭ ಲೈವ್ ನವೀಕರಣಗಳು: ಮೇರಿ ಕೋಮ್, ಮನ್‌ಪ್ರೀತ್ ಸಿಂಗ್ ಭಾರತವನ್ನು ಮುನ್ನಡೆಸಲಿದ್ದಾರೆ.




ಟೋಕಿಯೊ ಒಲಿಂಪಿಕ್ಸ್ 2020 ಉದ್ಘಾಟನಾ ಸಮಾರಂಭವು ಲೈವ್ ಅಪ್‌ಡೇಟ್‌ಗಳು:

 ಇದು ಬೇರೆ ಯಾವುದೇ ರೀತಿಯ ಒಲಿಂಪಿಕ್ಸ್ - ಮತ್ತು ಟೋಕಿಯೊ ಕ್ರೀಡಾಕೂಟಗಳು ಖಂಡಿತವಾಗಿಯೂ ಅlla - ಆದರೆ ಇದು ಯುದ್ಧಗಳು, ಬಹಿಷ್ಕಾರಗಳು ಮತ್ತು ಈಗ ಅದರ 125 ವರ್ಷಗಳ ಆಧುನಿಕ ಇತಿಹಾಸದಲ್ಲಿ ಸಾಂಕ್ರಾಮಿಕ ರೋಗಗಳ ಮೂಲಕ ಸತತ ಪ್ರಯತ್ನ ನಡೆಸಿದೆ ಕರೋನವೈರಸ್ ಸಾಂಕ್ರಾಮಿಕದಿಂದ ಉಂಟಾದ 12 ತಿಂಗಳ ವಿಳಂಬದಿಂದಾಗಿ ಟೋಕಿಯೊ ಒಲಿಂಪಿಕ್ಸ್ ಈಗಾಗಲೇ ಹೊಸ ಮೈದಾನವನ್ನು ಮುರಿದುಬಿಟ್ಟಿದೆ , ಇದನ್ನು ಮೊದಲ ಬಾರಿಗೆ ಬೆಸ-ಸಂಖ್ಯೆಯ ವರ್ಷಕ್ಕೆ ತಳ್ಳಿದೆ. ಆದರೆ ಜಪಾನ್‌ನಲ್ಲಿ ಯಾವುದೇ ಅಭಿಮಾನಿಗಳಿಗೆ ಅನುಮತಿ ಇಲ್ಲದಿರುವುದರಿಂದ, ಪ್ರೇಕ್ಷಕರಿಲ್ಲದ ಮೊದಲ ಕ್ರೀಡಾಕೂಟ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಶುಕ್ರವಾರ ನಡೆಯುವ ಭವ್ಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾರತ ತಮ್ಮ 120+7 ಕ್ರೀಡಾಪಟುಗಳು ದೇಶವನ್ನು ಪ್ರತಿನಿಧಿಸುತ್ತದೆ. ಜಪಾನ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಕ್ಸಿಂಗ್ ಶ್ರೇಷ್ಠ ಎಂಸಿ ಮೇರಿ ಕೋಮ್ ಮತ್ತು ಭಾರತೀಯ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಧ್ವಜಾರೋಹಣ ಮಾಡಲಿದ್ದಾರೆ. ಭಾರತೀಯ ಪ್ಯಾಡ್ಲರ್ಗಳಾದ ಎ ಶರತ್ ಕಮಲ್ ಮತ್ತು ಮಾನಿಕಾ ಬಾತ್ರಾ ಅವರು ಮರುದಿನ ತಮ್ಮ ಆರಂಭಿಕ ಪಂದ್ಯವನ್ನು ಹೊಂದಿರುವುದರಿಂದ ಸಮಾರಂಭದಲ್ಲಿ ಭಾಗವಹಿಸುವುದನ್ನು ವಿರೋಧಿಸಿದ್ದಾರೆ.

2020 ರ ಬೇಸಿಗೆ ಒಲಿಂಪಿಕ್ಸ್, ಅಧಿಕೃತವಾಗಿ XXXII ಒಲಿಂಪಿಯಾಡ್‌ನ ಕ್ರೀಡಾಕೂಟ ಮತ್ತು ಟೋಕಿಯೊ 2020 ಎಂದು ಬ್ರಾಂಡ್ ಮಾಡಲಾಗಿದೆ, ಇದು ಅಂತರರಾಷ್ಟ್ರೀಯ ಬಹು-ಕ್ರೀಡಾ ಕಾರ್ಯಕ್ರಮವಾಗಿದ್ದು, ಜುಲೈ 23 ರಿಂದ 2021 ರ ಆಗಸ್ಟ್ 8 ರವರೆಗೆ ಜಪಾನ್‌ನ ಟೋಕಿಯೊದಲ್ಲಿ ನಡೆಯಲಿದೆ, ಕೆಲವು ಪ್ರಾಥಮಿಕ ಘಟನೆಗಳು ಜುಲೈ 21 ರಿಂದ ಪ್ರಾರಂಭವಾಗುತ್ತವೆ. 

Quick and live Update Just follow👉Twitter 






NISHTHA 2.0

 
National Initiative for School Heads' and Teachers' Holistic Advancement


🙏ನಿಷ್ಠಾ 2.0 ತರಬೇತಿ 2021🙏

🙏💐 ಶಾಲಾ‌ ಶಿಕ್ಷಕರಿಗಾಗಿ ನಿಷ್ಠಾ 2.0 ಆನಲೈನ್ ತರಬೇತಿ 2021 ರ ಸಂಪೂರ್ಣ ಮಾಹಿತಿ

👉KRP ಗಳ ಪಾತ್ರ & ಜವಾಬ್ದಾರಿ
👉 Block level technical and developmentation community ಪಾತ್ರ & ಜವಾಬ್ದಾರಿ
👉 District level technical and developmentation community ಪಾತ್ರ & ಜವಾಬ್ದಾರಿ
👉CTE ರವರು ಪಾತ್ರ & ಜವಾಬ್ದಾರಿ 
👉ಶಿಕ್ಷಕರ ಪಾತ್ರ & ಜವಾಬ್ದಾರಿ
👉ಸಮಗ್ರ ಮಾಹಿತಿಗಾಗಿ ಕ್ಲಿಕ್ ಮಾಡಿ👇

Click Here


➡️ ಟೆಲಿಗ್ರಾಂ, ದೀಕ್ಷಾ,ನಿಷ್ಠಾ APP ಗಳು ಈ ತರಬೇತಿಗೆ ಅವಶ್ಯಕವಿದ್ದು, ಪ್ರತಿ ಶಿಕ್ಷಕರು ಕಡ್ಡಾಯವಾಗಿ ಡೌನ್ಲೋಡ್ ಮಾಡಿಕೊಳ್ಳುವುದು.

                    👉 ಟೆಲಿಗ್ರಾಂ Download
                    👉ದೀಕ್ಷಾ      Download
                    👉ನಿಷ್ಠಾ       Download

For more Details Official Website:-Click Here
For more About NISHTHA:- Click here



ಕ್ರಾಂತಿ ಪುರುಷರಿಗೆ ಜನ್ಮ ದಿನದ ಶುಭಾಶಯಗಳು


 

Tuesday, 20 July 2021

Tokyo2020 Indian Participents

Below are the names of Indian qualified for the Olympics in Tokyo:



Archery
  • Tarundeep Rai, Men’s Recurve
  • Atanu Das, Men’s Recurve
  • Pravin Jadhav, Men’s Recurve
  • Deepika Kumari, Women's Recurve
The men's trio will also compete as a team at Tokyo 2020.

Archery’s support staffs

Coach: Mim Bahdur Gurung
Physiotherapist: Chinmay Shrirang Bhide

Check India's events full schedule and live telecast details here

Athletics

  • KT Irfan, Men's 20km race walking
  • Sandeep Kumar, Men's 20km race walking
  • Rahul Rohilla, Men's 20km race walking
  • Bhawna Jat, Women's 20km race walking
  • Priyanka Goswami, Women's 20km race walking
  • Avinash Sable, Men's 3000m steeplechase
  • Murali Sreeshankar, Men's long jump
  • MP Jabir, Men's 400m hurdles
  • Neeraj Chopra, Men's javelin throw
  • Shivpal Singh, Men's javelin throw
  • Annu Rani, Women's javelin throw
  • Tajinderpal Singh Toor, Men's shot put
  • Dutee Chand, Women's 100m and 200m
  • Kamalpreet Kaur, Women's discus throw
  • Seema Punia, Women's discus throw
  • 4x400 Mixed Relay
  • Men's 4x400m Relay

support staffs

Coaches: P Radhakrishnan Nair, Galina Bukharina, Dr Klaus, Mohinder Singh, Uwe Hohn, Rajmohan K, Amrish Kumar, Alexander Artsybashev, S Murali, N Ramesh, Alexander Sinitsyn, Rakhi Tyagi and Gurmeet Singh.

Support staff: Elmira Kiseleva, Abhishek Pandey, Ishaan Marwaha, Dr Andrei, Simoni Shah, Chandre, Pawan Kumar, Ketan Hulawale; Team Doctor: Dr Brajesh Koushle; Team Leader: Dr Madhukant Pathak.

Badminton

  • PV Sindhu, Women’s singles
  • B Sai Praneeth, Men’s singles
  • Satwiksairaj Rankireddy and Chirag Shetty, Men’s doubles
Badminton support staffs

Coaches: Tae Seng Park, Mathias Boe.

Physiotherapist: Evangeline Baddam, Sumansh Sivalanka, Dwi Santosa Agus

Check India's badminton full schedule and match timings here


Boxing

  • Vikas Krishan (Men's, 69kg)
  • Lovlina Borgohain (Women's, 69kg)
  • Ashish Kumar (Men's, 75kg)
  • Pooja Rani (Women's, 75kg)
  • Satish Kumar (Men's, 91kg)
  • Mary Kom (Women's, 51kg)
  • Amit Panghal (Men's, 52kg)
  • Manish Kaushik (Men's, 63kg)
  • Simranjit Kaur (Women's, 60kg)
Indian boxing queen MC Mary Kom. 


Indian boxing queen MC Mary Kom.  
Boxing support staff:


Coach: Santiago Nieva, Raffaele Bergamasco, CA Kuttappa, Mohammad Ali Qamar, Chhote Lal

Physiotherapist: Aayush Yekhande

Doctor: Karanjeet Singh

Equestrian

Fouaad Mirza is the first Indian to qualify for the Games in 20 years.

Veterinary Doctor: Grigorios Maleas
Groom: Johana Pohjonen
Physiotherapist: Veronia Sinz

Fencing

Bhavani Devi became the first Indian fencer to qualify for the Olympics.

Golf

  • Anirban Lahiri
  • Udayan Mane
  • Aditi Ashok

Gymnastics

Pranati Nayak is only the second Indian woman gymnast to qualify for the Olympics.

Coach: Lakhan Sharma

Hockey

Men’s National Team

  • Goalkeepers: P. R. Sreejesh
  • Defenders: Harmanpreet Singh, Rupinder Pal Singh, Surender Kumar, Amit Rohidas, Birendra Lakra
  • Midfielders: Hardik Singh, Manpreet Singh, Vivek Sagar Prasad, Nilakanta Sharma, Sumit
  • Forwards: Shamsher Singh, Dilpreet Singh, Gurjant Singh, Lalit Kumar Upadhyay, Mandeep Singh


Women’s National Team

  • Goalkeepers: Savita
  • Defenders: Deep Grace Ekka, Nikki Pradhan, Gurjit Kaur, Udita.
  • Midfielders: Nisha, Neha, Sushila Chanu Pukhrambam, Monika, Nanjot Kaur, Salima Tete.
  • Forwards: Rani, Navneet Kaur, Lalremsiami, Vandana Katariya, Sharmila, Devi.

Judo

Sushila Devi Likmabam will be India's only participant in Judo at Tokyo 2020.

Rowing

  • Arjun Jat
  • Arvind Singh

Sailing

For the first time, India will have more than two sailors at the Olympics, including Nethra Kumanan, the first Indian woman sailor. For the first time India will be competing in more than one sailing event - Laser Radial, Laser Standard and 49er.

  • Nethra Kumanan, Laser Radial
  • Vishnu Saravanan, Laser Standard
  • KC Ganapathy and Varun Thakkar, 49er

Shooting

India will have its largest contingent with 15 shooters.

  • Anjum Moudgil, 10m Women’s Air Rifle
  • Apurvi Chandela, 10m Women’s Air Rifle
  • Divyansh Singh Panwar, 10m Men’s Air Rifle
  • Deepak Kumar, 10m Men’s Air Rifle
  • Tejaswini Sawant, 50m Women’s Rifle 3 Position
  • Sanjeev Rajput, 50m Men’s Rifle 3 Position
  • Aishwarya Pratap Singh Tomar, 50m Men’s Rifle 3 Position
  • Manu Bhaker, 10m Women’s Air Pistol
  • Yashaswini Singh Deswal, 10m Women’s Air Pistol
  • Saurabh Chaudhary, 10m Men’s Air Pistol
  • Abhishek Verma, 10m Men’s Air Pistol
  • Rahi Sarnobat, 25m Women’s Pistol
  • Chinki Yadav, 25m Women’s Pistol
  • Angad Veer Singh Bajwa, Men’s Skeet
  • Mairaj Ahmad Khan, Men’s Skeet

Swimming

  • Sajan Prakash
  • Srihari Nataraj
  • Maana Patel

Table Tennis

Four Indian table players qualified for the Olympics at the Asian qualifiers in Doha in March, including Sharath Kamal, who will be making his fourth appearance at the Games.

  • Sharath Kamal
  • Sathiyan Gnanasekaran
  • Sutirtha Mukherjee
  • Manika Batra

Sharath Kamal and Manika Batra will also compete together in the mixed doubles after earning their Olympic berths at the Asian qualifiers.

Tennis

Sumit Nagal gets last minute entry in the Tokyo Olympics 2021 after some players withdraw their names. qualified for Tokyo 2020 via her protected ranking and she will partner with Ankita Raina in the women's doubles.

  • and Ankita Raina, Women's Doubles
  • Sumit Nagal, Men's singles


Weightlifting

Mirabai Chanu will be India's only representative in weightlifting at Tokyo 2020. Ranked second in the world, the former world champion is among the favourites for a medal in the women's 49kg weight division.

Wrestling

India is sending seven wrestlers to Tokyo. With Sonam Malik winning the quota in the 62kg category, Rio 2016 bronze medallist Sakshi Malik will not be wrestling at the Tokyo Olympics.

  • Seema Bisla, Women's Freestyle, 50kg
  • Vinesh Phogat, Women’s Freestyle 53kg
  • Anshu Malik, Women's Freestyle 57kg
  • Sonam Malik, Women's Freestyle 62kg
  • Ravi Kumar Dahiya, Men’s Freestyle 57kg
  • Bajrang Punia, Men’s Freestyle 65kg
  • Deepak Punia, Men’s Freestyle 86 kg


Saturday, 17 July 2021

ಉತ್ತಮ ಪೋಷಕರಾಗಲು 25 ಸೂತ್ರಗಳು


1.ಮಕ್ಕಳು ಜೊತೆಗಿದ್ದಾಗ ಮೊಬೈಲ್‌ನ್ನು ಪಕ್ಕಕ್ಕಿಟ್ಟು ಬಿಡಿ.
2. ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಗಮನವಿಟ್ಟು ಕೇಳಿಸಿಕೊಳ್ಳಿ.
3. ಅವರ ದೃಷ್ಟಿಕೋನ ಹಾಗೂ ಅಭಿಪ್ರಾಯಗಳನ್ನು ಗೌರವದಿಂದ ಒಪ್ಪಿಕೊಳ್ಳಿ.
4.ಅವರ ಜೊತೆ ಸಾಧ್ಯವಾದಷ್ಟು ಮಾತುಕತೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
5. ಅವರನ್ನು ಗೌರವದಿಂದ ಕಾಣಿರಿ, ಹಾಗೂ ಸದಾ ಅವರನ್ನು ರಚನಾತ್ಮಕವಾಗಿ ಹೊಗಳಿ.
6.ಅವರೊಂದಿಗೆ ಸಂತಸದ ವಿಚಾರಗಳನ್ನು ಹಂಚಿಕೊಳ್ಳಿ.
7. ಅವರ ಸ್ನೇಹಿತರ ಬಗ್ಗೆ ಹಾಗು ಅವರಿಷ್ಟಪಡುವ ವ್ಯಕ್ತಿಗಳ ಬಗ್ಗೆ ಒಳ್ಳೆಯ ಮಾತಾಡಿ.
8.ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ನೆನಪಿನಲ್ಲಿಡಿ.
9.ಅವರು ಹೇಳಿದ ವಿಷಯವನ್ನೇ ಪದೇ ಪದೇ ಹೇಳುತ್ತಿದ್ದರೂ ಮೊದಲ ಸಾರಿ ಕೇಳುತ್ತಿರುವಂತೆ ಕುತೂಹಲದಿಂದ ಆಲಿಸಿ.
10 ಗತಿಸಿ ಹೋದ ಕಹಿ ನೆನಪುಗಳನ್ನು ಪದೇ ಪದೇ ಜ್ಞಾಪಿಸಬೇಡಿ.
11. ಅವರ ಉಪಸ್ಥಿತಿಯಲ್ಲಿ ಅವರಿಗೆ ಉಚಿತವಲ್ಲದ ಸಂಭಾಷಣೆ ಬೇಡ.
12 ಮಕ್ಕಳ ಸಣ್ಣ ಪುಟ್ಟ ಸಾಧನೆಯನ್ನು ಹಬ್ಬದಂತೆ ಆಚರಿಸಿ ಉಡುಗೊರೆ ಕೊಡಿ.
13. ಅವರ ಆಲೋಚನೆ, ಅಭಿಪ್ರಾಯಗಳನ್ನು ಅಲ್ಲಗಳೆಯಬೇಡಿ.
14.ಅವರು ಮಾತನ್ನು ಆರಂಭಿಸುವಾಗಲೇ ಬಾಯಿಮುಚ್ಚು ಎಂದು ತಡೆಯಬೇಡಿ.
15. ಅವರಿಗೆ ನಾಯಕತ್ವದ ಅವಕಾಶಗಳನ್ನು ನೀಡಿ.
16. ಅವರ ಜೊತೆಯಲ್ಲೇ ಸಾಗುತ್ತ ಹೆಜ್ಜೆ ಹೆಜ್ಜೆಗು ಆತ್ಮವಿಶ್ವಾಸ ತುಂಬಿ.
17. ಇತರೆ ಮಕ್ಕಳ ಪ್ರಗತಿಯನ್ನು ಮುಂದಿಟ್ಟುಕೊಂಡು, ನಿಮ್ಮ ಮಕ್ಕಳನ್ನು ಹೀಯಾಳಿಸಬೇಡಿ.
18.ಅವರನ್ನು ಆಸಕ್ತಿಯಿಂದ ಆಲಿಸುತ್ತಿರುವಂತೆ ಇರಲಿ ನಿಮ್ಮ ಭಂಗಿ.
19. ನಿಮ್ಮ ಪ್ರಾರ್ಥನೆಗಳಲ್ಲಿ ಅವರು ಸದಾ ಇರಲಿ.
20. ಅವರ ಸಾಮಿಪ್ಯದಲ್ಲಿ ನೀವು ಬೋರಾದಂತೆ, ಸುಸ್ತಾದಂತೆ ಕಾಣಿಸಿಕೊಳ್ಳಬೇಡಿ.
 ಲವಲವಿಕೆಯಾಗಿರಿ.
21.ಅವರ ತಪ್ಪುಗಳನ್ನು ಹಂಗಿಸಬೇಡಿ / ಕುಹಕ ನಗೆ ಬೇಡ.
22.ಅವರೊಂದಿಗೆ ಸಂಭಾಷಿಸುವಾಗ ನಿಮ್ಮ ಶಬ್ದಗಳ ಬಗ್ಗೆ ಜಾಗ್ರತೆಯಿರಲಿ. 
23.ಮಕ್ಕಳ ಮುಂದೆ ಕಿತ್ತಾಡಬೇಡಿ. ನಿಮ್ಮಲ್ಲಿ ಸಾಮರಸ್ಯದ ಕೊರತೆಯಿದ್ದರೆ ಅದು ನಿಮ್ಮಲ್ಲೆ ಇರಲಿ
24.ಮಕ್ಕಳು ನಿಮ್ಮ ಜೀವನದ ಅತ್ಯಂತ ಪ್ರಮುಖ ಆದ್ಯತೆಯಾಗಿರಲಿ. 
25.ಮಕ್ಕಳ ಮನಸ್ಸು ವಿಕಸನಗೊಳ್ಳುವ ಕಥೆಗಳನ್ನು ಕೇಳಲು,ನೋಡಲು ಅವರಿಗೆ ಅವಕಾಶ ನೀಡಿ.

 ಅಂತಿಮವಾಗಿ ನಿಮ್ಮ ಗುರಿ, ನಿಮ್ಮಮಕ್ಕಳು ಸತ್ಪ್ರಜೆಯಾಗುವುದಾಗಲಿ.

Saturday, 3 July 2021

DD Mobile App



ಆತ್ಮೀಯ 
ಎಲ್ಲಾ ಪೋಷಕರೇ/ವಿದ್ಯಾರ್ಥಿಗಳೇ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸಂವೇದಾ' ದೂರದರ್ಶನ ಇ-ಕಲಿಕಾ ಕಾರ್ಯಕ್ರಮವನ್ನು ವೇಳಾಪಟ್ಟಿಯ ಪ್ರಕಾರ ನೋಡುವುದು ಹಾಗೂ ಮುಖ್ಯ ಅಂಶಗಳನ್ನು ನೋಟ್ಸ್ ಮಾಡಿಕೊಂಡು ಮನನ ಮಾಡಿಕೊಳ್ಳುವುದು. ಈ ವಿಡಿಯೋ ಪಾಠಗಳು ತುಂಬಾ ಉಪಯುಕ್ತವಾಗಿದ್ದು ವಿದ್ಯಾರ್ಥಿಗಳು   ಇದನ್ನು ತಪ್ಪದೇ ದಯವಿಟ್ಟು ನೋಡಲು ತಿಳಿಸಿ.

Sun direct cha no 268
Airtel cha no 995
Tata sky  cha no 1699
Videocon cha no 849
Dish tv ch n0 1729


 DD free TV channal  App ಡೌನ್ಲೋಡ್ ಮಾಡಲು ಈ ಮುಂದಿನ ಲಿಂಕ್ ಬಳಸಿಕೊಳ್ಳುವುದು 
( https://play.google.com/store/apps/details?id=com.ddnational.freedish )
ಓಪನ್ ಮಾಡಿ ಲಾಂಗ್ವೇಜ್ ಸೆಲೆಕ್ಟ್ ಮಾಡಿ ಚಂದನ ಟಿ ವಿ ಮೇಲೆ ಕ್ಲಿಕ್ ಮಾಡಿದರೆ ಚಂದನ ಟಿ ವಿ ಲೈವ್ ನಲ್ಲಿ ವೀಕ್ಷಿಸಬಹುದು.
💐💐💐💐💐💐💐💐💐💐 ಮನೆಯಲ್ಲಿಯೇ ಸುರಕ್ಷಿತವಾಗಿರಿ...ಕೋವಿಡ್ ನ ಸುರಕ್ಷಿತ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ💐💐💐💐💐💐

ಉತ್ತಮ ಪೊಷಕರಾಗಲು 25 ಸೂತ್ರಗಳು

1.ಮಕ್ಕಳು ಜೊತೆಗಿದ್ದಾಗ ಮೊಬೈಲ್‌ನ್ನು ಪಕ್ಕಕ್ಕಿಟ್ಟು ಬಿಡಿ. 2. ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಗಮನವಿಟ್ಟು ಕೇಳಿಸಿಕೊಳ್ಳಿ. 3. ಅವರ ದೃಷ್ಟಿಕೋನ ಹಾಗೂ ಅಭಿಪ್...